ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
ಭಾರತದಲ್ಲಿ ಪೆಟ್ರೋಲಿಯಂ ಉತ್ಪಾದನೆಗಳ ತಯಾರಿಕೆ, ಆಮದು ಹಾಗೂ ವಿತರಣದಲ್ಲಿ ಹೊಂದಾಣಿಕೆಯೇರ್ಪಡಿಸುವ ಉದ್ದೇಶದಿಂದ 1964ರ ಸೆಪ್ಟಂಬರ್ 1ರಂದು ಇಂಡಿಯನ್ ಆಯಿಲ್ ಕಂಪನಿ ಲಿಮಿಟೆಡ್ ಎಂಬ ಎರಡು ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳನ್ನು ಸಂಯೋಜಿಸಿ ಸ್ಥಾಪಿಸಿದ ಸರ್ಕಾರಿ ಒಡೆತನದ ಉದ್ಯಮ. ಅಧಿಕೃತ ಷೇರು ಬಂಡವಾಳ ರೂ. 85 ಕೋಟಿ.

	ಪೆಟ್ರೋಲಿಯಂನ ಪರಿಷ್ಕøತ ಉತ್ಪಾದನೆಗಳನ್ನೂ ಅಕ್ಷತೈಲ (ಆಕ್ಸ್ಲ್ ಆಯಿಲ್) ಮೃದು ಚಾಲಕ ತೈಲಗಳು (ಲೂಬ್ರಿಕೇಟಿಂಗ್ ಆಯಿಲ್ಸ್), ಗ್ರೀಸ್, ವಿದ್ಯುತ್ ಪರಿವರ್ತಕ ತೈಲ (ಟ್ರಾನ್ಸ್‍ಫಾರ್ಮರ್ ಆಯಿಲ್), ವಾಯುಯಾನ ತಿರುಬಾನಿ ತೈಲ (ಏವಿಯೇಷನ್ ಟರ್ಬೈನ್ ಆಯಿಲ್), ಮುಂತಾದುವನ್ನೂ ರೂಪಾಯಿ ಪಾವತಿಮಾಡಿಯಾಗಲಿ, ಬೇರೆ ವಿಧಾನಗಳಿಂದಾಗಲಿ ಈ ಸಂಸ್ಥೆ ಆಮದು ಮಾಡಿಕೊಳ್ಳುತ್ತದೆ. ಈ ಉತ್ಪಾದನೆಗಳ ದಾಸ್ತಾನು ಹಾಗೂ ವಿತರಣೆಗಾಗಿ ಇದು ಮುಕ್ತ ವ್ಯವಸ್ಥೆ ಮಾಡಿದೆ. ಕಾರ್ಪೊರೇಷನ್ನಿನಲ್ಲಿ ತೈಲ ಪರಿಷ್ಕರಣ ಶಾಖೆ ಹಾಗೂ ಮಾರಾಟ ಶಾಖೆಯೆಂಬ ಎರಡು ವಿಭಾಗಗಳಿವೆ. ಭಾರತದ ಮುಖ್ಯ ನಗರಗಳಲ್ಲಿರುವ ಲೂಬ್ ತೈಲ ಮಿಶ್ರಣ ಯಂತ್ರ ಸ್ಥಾವರಗಳನ್ನು ನಡೆಸುತ್ತಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಮೆರಿಕ ಸಂಯುಕ್ತ ಸಂಸ್ಥಾನದ ಮೊಬಿಲ್ ಪೆಟ್ರೋಲಿಯಂ ಇನ್ಕಾರ್ಪೊರೇಟೆಡ್ ಎಂಬ ಸಂಸ್ಥೆಯೊಂದಿಗೆ ಸಮಪಾಲು ಹೊಂದಿದೆ. ಗೌಹತಿ-ಸಿಲಿಗುರಿ, ಹಾಲ್ಡಿಯ, ಬತಾನಿ-ಕಾನ್ಪುರ, ಕೋಯಲಿ-ಅಹಮದಾಬಾದ್‍ಗಳ ತೈಲ ರವಾನೆ ಕೊಳವೆಗಳು ಈ ಸಂಸ್ಥೆಗೆ ಸೇರಿವೆ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ